ಬಾಳು ಬೆಳಗಿತು (೧೯೭೦, ಕನ್ನಡ): ಸಿದ್ದಲಿ೦ಗಯ್ಯನವರ ನಿರ್ದೇಶನ, ಡಾ|| ರಾಜಕುಮಾರ್ (ದ್ವಿಪಾತ್ರ), ಭಾರತಿ, ಜಯಂತಿ ಮತ್ತು ದ್ವಾರಕೀಶ್ ಮುಖ್ಯತಾರಾಗಣದಲ್ಲಿ ತೆರೆಕಂಡ ಕನ್ನಡ ಸಿನಿಮಾ ಬಾಳು ಬೆಳಗಿತು. ಚಿತ್ರಶ್ರೀ ಅಂತರರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ಮೂಡಿಬ೦ದ ಈ ಚಿತ್ರದ ನಿರ್ಮಾಪಕರು ಕೆ. ಎಸ್. ಪ್ರಸಾದ್, ಬಿ. ವಿ. ಶ್ರೀನಿವಾಸ್ ಮತ್ತು ಎ. ಎಸ್. ಭಕ್ತವತ್ಸಲಂ. ಪತ್ತೇದಾರಿ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರ ಡಾ|| ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದ ೧೨೬ನೇ ಚಿತ್ರವಾಗಿದೆ. ಇದನ್ನು ತೆಲುಗು ಭಾಷೆಯಲ್ಲಿ ಮಂಚಿವಾಡು (), ಹಿಂದಿಯಲ್ಲಿ ಹಮ್‌ಶಕಲ್( (1974 )) ತಮಿಳಿನಲ್ಲಿ ಊರುಕ್ಕು ಉೞೈಪವನ್ ( .) ಎಂದು ರೀಮೇಕ್ ಮಾಡಲಾಗಿದೆ == ಕಥಾವಸ್ತು == ಇದರಲ್ಲಿ ನಾಯಕ ರಾಜ್‌ಕುಮಾರ್ ಶಂಕರ್ ಮತ್ತು ಪಾಪಣ್ನ ಎಮ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಂಕರನ ಸೇವಕ ಪಾಪಣ್ಣ. ಶಂಕರ್ ದೊಡ್ಡ ಶ್ರೀಮಂತ. ಅವನ ಪತ್ನಿಯ ಪಾತ್ರ ಜಯಂತಿ_(ನಟಿ) ( ಲಲಿತಾ).ಪಾಪಣ್ಣನ ಪತ್ನಿ ಭಾರತಿ_(ನಟಿ) (ಲಕ್ಷ್ಮಿ). ಈಗಾಗಲೇ ಪಾಪಣ್ಣ (ರಾಜ್‌ಕುಮಾರ್) ಬಡ ಲಕ್ಷ್ಮಿಯನ್ನು ಮದುವೆಯಾಗಿದ್ದಾನೆ ಆದರೆ ಇನ್ನೊಂದು ಕಡೆ ಶ್ರೀಮಂತ ಉತ್ತರಾಧಿಕಾರಿ ಲಲಿತಾಳನ್ನು ಮದುವೆಯಾಗಿದ್ದಾನೆ ಮತ್ತು ಅವನೇ ಶಂಕರ್ ಎಂದು ನಟಿಸುತ್ತಿದ್ದಾನೆ. ಅವನು ಎರಡು ಸಮಯದಲ್ಲಿ, ಎರಡು ಮುಖವನ್ನು ಹೊಂದಿರುವ ವ್ಯಕ್ತಿಯಾಗಿ ನಾಯಕನೇ ಯಾವುದೋ ರಹಸ್ಯವನ್ನು ಮರೆಮಾಡಲು ಯತ್ನಿಸುತ್ತಿದ್ದಾನೆ, ಏನಿರಬಹುದು? ಇಬ್ಬರು ಹೆಂಗಸರ ನಡುವೆ ಸಿಕ್ಕಿಬಿದ್ದ ತನ್ನ ಜೀವನದಲ್ಲಿ ಸಂದಿಗ್ಧತೆಯನ್ನು ಹೇಗೆ ನಿಭಾಯಿಸುತ್ತಾನೆ? ಕೊನೆಯವರೆಗೂ ಸಸ್ಪೆನ್ಸ್, ಉತ್ತಮ ಸಂಗೀತ ಮತ್ತು ಆಲ್-ರೌಂಡ್ ಉತ್ತಮ ಅಭಿನಯ ಪ್ರದರ್ಶನಗಳು ಇವೆ == == ರಾಜ್‌ಕುಮಾರ್ - ಶಂಕರ್ / ಪಾಪಣ್ಣ (ದ್ವಿಪಾತ್ರ) ಜಯಂತಿ_(ನಟಿ) - ಲಲಿತಾ ಭಾರತಿ_(ನಟಿ) - ಲಕ್ಷ್ಮಿ ಟಿ.ಬಿ.ನಾಗಪ್ಪ ದ್ವಾರಕೀಶ್ ಟೈಗರ್ ಪ್ರಭಾಕರ್ ರಮಾ ಶಾಂತಮ್ಮ ಜ್ಯೋತಿಲಕ್ಷ್ಮಿ- ನರ್ತಕಿ == ಧ್ವನಿಮುದ್ರಿಕೆ == ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದಾರೆ ಮತ್ತು ಗೀತೆಗಳಿಗೆ ಸಾಹಿತ್ಯವನ್ನು ಚಿ. ಉದಯಶಂಕರ್ ಮತ್ತು ವಿಜಯನಾರಸಿಂಹ ನೀಡಿದ್ದಾರೆ. === === == == 1970 == == == == ಬಾಳು ಬೆಳಗಿತು @ ಐ ಎಮ್ ಡಿ ಬಿ